Bahuroopi National Theatre Festival 2022

This event has ended

ರಂಗಾಯಣ ರಂಗಹಬ್ಬದ ವಿಷಯವಸ್ತು ‘ತಾಯಿ’ – Motherhood

‘ತಾಯಿ’ ಜಗತ್ತಿನ ಅದ್ಬುತ ಶಕ್ತಿ. ಇದೊಂದು ಶಬ್ದವೇ ನಮ್ಮಲ್ಲಿ ಭಾವತರಂಗಗಳನ್ನು ಹಬ್ಬಿಸುತ್ತವೆ. ಎಂತಹ ಕಲ್ಲು ಮನಸ್ಸಿನವರು ಕರಗಿ ಹೋಗುವ ಮಾಂತ್ರಿಕತೆ ಈ ಶಬ್ದದಲ್ಲಿದೆ. ಜಗತ್ತಿನ ಅಂತರ್ ಶಕ್ತಿಯ ಸಂಕೇತ ತಾಯಿ. ತಾಯಿಯೆನ್ನುವುದು ಚಲನಶೀಲ, ಶುಭ್ರ, ಸಾಂತ್ವಾನಗೊಳಿಸುವ ಅತೀಂದ್ರೀಯ ಶಕ್ತಿ. ತಾಯಿ ಶುದ್ಧಾಂಗ ಶುದ್ಧ ನದಿಯಿದ್ದಂತೆ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಹರಿಯುತ್ತಾ, ಮತ್ತೆಲ್ಲೋ ಐಕ್ಯವಾಗುವವಳು. ಅವತಾರ ಪುರುಷೆ. ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ, ಸೊಸೆಯಾಗಿ, ಗೃಹಣಿಯಾಗಿ, ಯಜಮಾನಿಯಾಗಿ ವೈವಿಧ್ಯಮಯ ಪಾತ್ರವಹಿಸುವ ಅದ್ಬುತ ರಂಗನಟಿ. ಜಗತ್ತನ್ನು ಪೊರೆಯುವವಳು ಇವಳೇ, ಇವಳ ತಾಯ್ತನವೇ. ಮನೆಯೆಂಬ ಗರ್ಭಕೋಶದಲ್ಲಿ ತಾಯಿಯೇ ಪೋಷಕಳು. ಎಲ್ಲರು ತಿಂದ ಮೇಲೆ ತಿನ್ನುವ, ಎಲ್ಲರೂ ಏಳುವ ಮೊದಲೇ ಏಳುವ, ಎಲ್ಲರು ಮಲಗಿದ ಮೇಲೆ ಮಲಗುವ, ಪೋಷಣೆಯನ್ನೇ ನಂಬಿ ಬದುಕುವ ಜೀವಿ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ತಾಯಿ. ಆಕೆಯದು ನಿರಂತರ ಜಾಗೃತಿ-ನಿರಂತರ ಪೋಷಣಾಕ್ರಿಯೆ.

For more details visit: 

http://www.rangayana.org/bahurupi-2022/

Address

Vinoba Road, Kalamandira Campus, Mysuru, Karnataka 570009

Open in Google Maps